ಪ್ರಜ್ವಲ್‌ ಪರಾರಿ : ಕೊನೆಗೂ ಗೆ ಉತ್ತರ ಸಿಗುವ ಕಾಲ ಸನಿಹವಾದಂತಿದೆ..! ಬೆಂಗಳೂರು, ಮೇ,23, 2024: ಎಸ್ ಐ ಟಿ ತನಿಖೆಗೆ ಪೂರಕವಾಗುವ ಮಹತ್ವದ ಸುಳಿವೊಂದು ಸಿಕ್ಕ ಬಗ್ಗೆ ಈಗ ಸುದ್ದಿಗಳು ಹರಿದಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫ್ಯಾನ್ಸ್‌ ಪೇಜ್‌, – ಪೇಜ್‌ ನಲ್ಲಿರುವ ಬರಹವನ್ನು ʼ ಮತ್ತೊಮ್ಮೆ ಸಿದ್ದರಾಮಯ್ಯ !! ʼ ಪೇಸ್‌ ಬುಕ್‌ ಪೇಜ ನಲ್ಲಿ ಶೇರ್‌ ಮಾಡಲಾಗಿದೆ. ಈ ಸುದ್ದಿಯ ಒಟ್ಟಾರೆ ಮಾಹಿತಿ ಹೀಗಿದೆ.. 92ನೇ ಜನ್ಮದಿನದಂದು ದೇವೇಗೌಡರಿಗೆ ವಿದೇಶದಿಂದ ಕರೆಯೊಂದು ಬಂದ ಬಗ್ಗೆ ಎಸ್ ಐ ಟಿಗೆ ಮಾಹಿತಿ ಸಿಕ್ಕಿದೆಯಂತೆ. ಆ ಐ ಎಸ್ ಡಿ ಕರೆ ಯಾರು ಮಾಡಿದ್ದರು, ಯಾರ ನಂಬರ್ ಮೂಲಕ ಬಂದಿತ್ತು , ಆ ಕರೆಯ ಮೂಲಕ ದೇವೇಗೌಡರೊಟ್ಟಿಗೆ ಮಾತಾಡಿದ್ದು ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ. ಈ ಸುದ್ದಿ ಈಗ ಪರಾರಿಯಾಗಿರುವ ಪ್ರಜ್ವಲ್‌ ಪತ್ತೆಯ ತನಿಖೆ ವೇಗವನ್ನೇ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರಿನ ಖ್ಯಾತ ಉದ್ಯಮಿ ಹಾಗೂ ಚಿನ್ನದ ವ್ಯಾಪಾರಿಯೂ ಆಗಿರುವ ದೇವೇಗೌಡರ ಕುಟುಂಬದ ಆಪ್ತ ವ್ಯಕ್ತಿಯೊಬ್ಬನ ಸಂಬಂಧಿಯ ವಿದೇಶಿ ಸಂಪರ್ಕ ಸಂಖ್ಯೆಯಿಂದ ಸಂಪರ್ಕಿಸಲಾದ ಆ ದೂರವಾಣಿಯಲ್ಲಿ ದೇವೇಗೌಡರ ಜತೆ ಆಗುಂತಕ ವ್ಯಕ್ತಿ 1.52 ನಿಮಿಷಗಳ ಕಾಲ ಮಾತಾಡಿದ್ದಾರೆ ಎನ್ನುತ್ತಿವೆ ಎಸ್ ಐ ಟಿ ಮೂಲಗಳು. ಏನೇನು ಮಾತಾಡಿದ್ದಾರೆ ಅನ್ನುವುದು ಬೇರೆ ಸಂಗತಿ. ತಮ್ಮ ತಾತನ ಜನ್ಮದಿನಕ್ಕೆ ಪ್ರಜ್ವಲ್ ಶುಭಾಶಯ ಕೋರಿರಬಹುದು ಅಥವಾ ಈ ಕೇಸಿನ ಬಗ್ಗೆ, ತಮ್ಮ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿರಬಹುದು. ತನಿಖೆಯ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ತಿಳಿಯಬಹುದು. ಆದರೆ ವಿಷಯ ಅದಲ್ಲ. ಪ್ರಮುಖ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ತಮ್ಮ ಮೊಮ್ಮಗ ಎಲ್ಲಿದ್ದಾನೆ ಎಂಬ ಮಾಹಿತಿ ದೇವೇಗೌಡರನ್ನೂ ಒಳಗೊಂಡಂತೆ ಅವರ ಕುಟುಂಬದ ಪ್ರತಿಯೊಬ್ಬರಿಗೂ ತಿಳಿದಿದೆ ಅನ್ನೋದು ಇದರಿಂದ ಖಾತ್ರಿಯಾಗುತ್ತೆ. ಆಪಾದಿತನೊಬ್ಬನನ್ನು ಮುಚ್ಚಿಡುತ್ತಿರುವ ಅಪರಾಧದಲ್ಲಿ ಈ ಕುಟುಂಬ ಭಾಗಿಯಾಗಿರುವುದು ಸತ್ಯವಾದಂತಾಗುತ್ತೆ. ಒಂದು ಅಪರಾಧದ ತನಿಖೆಯ ದಿಕ್ಕನ್ನೇ ಡಿ-ರೇಲ್ ಮಾಡುವ, ಅಪರಾಧಿಯನ್ನೇ ನಿಗೂಢವಾಗಿ ಬಚ್ಚಿಟ್ಟು ರಕ್ಷಿಸುವ, ತನಿಖಾ ಸಂಸ್ಥೆಯನ್ನೇ ಅವಮಾನಿಸುವ, ಅಪರಾಧ ಪ್ರಕರಣಕ್ಕೆ ರಾಜಕೀಯ ಲೇಪ ಬಳಿಯುತ್ತಿರುವ, ಕುಟುಂಬದ ಕುಡಿಯ ರಕ್ಷಣೆಗೋಸ್ಕರ ಮಹಿಳಾ ಸಂತ್ರಸ್ತೆಯರಿಗೆ, ಇಡೀ ಸ್ತ್ರೀ ಕುಲಕ್ಕೇ ದ್ರೋಹಗೈಯುತ್ತಿರುವ ಆ ಕುಟುಂಬಕ್ಕೆ `ಹುತಾತ್ಮ’ ಪಟ್ಟ ಕಟ್ಟಲು ಯತ್ನಿಸುತ್ತಿರುವವರು ಈ ನೆಲದ ಕಾನೂನಿಗಷ್ಟೇ ದ್ರೋಹ ಎಸಗುತ್ತಿಲ್ಲ; ತಾವು ಹುಟ್ಟಿಬಂದ ತಾಯಿಗರ್ಭಕ್ಕೂ ಅಪಮಾನಗೈಯುತ್ತಿದ್ದಾರೆ. : , , : . ’ , – ʼ !! . 92nd . , , . .