ಮೆಗಾಸ್ಟಾರ್ ಚಿರಂಜೀವಿ ‘ಆಚಾರ್ಯ’ ಬಿಡುಗಡೆ ದಿನಾಂಕವೂ ಮುಂದಕ್ಕೆ ಬೆಂಗಳೂರು, ಏಪ್ರಿಲ್ 29, 2021 (..):ಮೆಗಾಸ್ಟಾರ್ ಚಿರಂಜೀವಿ ಅವರ ಅಭಿನಯದ ಬಹುನಿರೀಕ್ಷೆಯ ಚಿತ್ರಆಚಾರ್ಯ ಬಿಡುಗಡೆ ದಿನವನ್ನು ಮುಂದೂಡಲಾಗಿದೆ. ಅಂದಹಾಗೆ ಮೆಗಾಸ್ಟಾರ್ ನಟನೆಯ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಏಕಕಾಲದಲ್ಲಿ ನಡೆಯುತ್ತವೆ ಎನ್ನಲಾಗಿದೆ. ಕೊರೊನಾ ಸೋಂಕಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆಯ ದಿನಾಂಕವನ್ನು ಮುಂದೂಡುವುದು ಸೂಕ್ತ ಎಂಬ ಸಲಹೆ ಮೇರೆಗೆ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ. ಕೊರೊನಾ ಪ್ರಕರಣ ಸಾಮಾನ್ಯ ಸ್ಥಿತಿಗೆ ಬಂದಾಗ ಹೊಸ ಬಿಡುಗಡೆಯ ದಿನಾಂಕವನ್ನು ಘೋಷಿಸುವುದಾಗಿ ಚಿತ್ರ ತಂಡ ತಿಳಿಸಿದೆ.