ಶಾಸಕ ಸಾ.ರಾ ಮಹೇಶ್ ಗೆ ತಿರುಗೇಟು: ನಾನು ಈ ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡಲು ಸಿದ್ಧ ಎಂದ ಸಚಿವ ಎಸ್.ಟಿ ಸೋಮಶೇಖರ್…. ಮೈಸೂರು,ಏಪ್ರಿಲ್,29,2021(..):ನಿನ್ನೆ ಸುದ್ಧಿಗೋಷ್ಠಿ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ ಎಂದು ಟೀಕಿಸಿದ್ದ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ ಮಹೇಶ್ ಗೆ ಸಚಿವ ಎಸ್ ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ನಾನು ಬದುಕಿದ್ದಾನಾ? ಕೆ.ಆರ್. ನಗರದ ಶಾಸಕರು ಬದುಕಿದ್ದಾರಾ? ಎಂದು ಜನರ ತೀರ್ಮಾನ ಮಾಡಿ ಹೇಳಲಿ. ಮೈಸೂರಿನ‌ 11 ವಿಧಾನಸಭಾ ಕ್ಷೇತ್ರದಲ್ಲಿ ಕರೋನಾ ಕುರಿತು ಸಭೆ ಮಾಡಿದ್ದೇನೆ. ಎಲ್ಲಾ ಕ್ಷೇತ್ರದಲ್ಲೂ ಆಯಾ ಆಯಾ ಶಾಸಕರು ಸಭೆಗೆ ಬಂದು ಚರ್ಚೆ ಮಾಡಿದ್ದಾರೆ. ಆದರೆ, ಕೆ.ಆರ್.‌ನಗರದ ಕ್ಷೇತ್ರದ ಶಾಸಕರು ಸಭೆಗೆ ಬರಲಿಲ್ಲ. ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದರೆ ಅವರು ಸಭೆಗೆ ಬರಬೇಕಿತ್ತು ಎಂದು ಕುಟುಕಿದರು. ನಾನು ಈ ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡಲು ಸಿದ್ಧ…. ನಾನು ಈ ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧನಿದ್ದೇನೆ. ಹಗಲಿರುಳು ಈ ಜಿಲ್ಲೆಯ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಜಿಲ್ಲೆಯ ಜ‌ನ ಗಮನಿಸಿದ್ದಾರೆ. ಈಗ ಜನರೇ ತೀರ್ಮಾನ ಮಾಡಲಿ ಯಾರು ಬದುಕಿದ್ದಾರೆ ಅಂತಾ? ಎಂದು ಶಾಸಕ ಸಾ.ರಾ ಮಹೇಶ್ ಗೆ ಟಾಂಗ್ ನೀಡಿದರು. ನನಗೂ ದಿನಕ್ಕೂ ವೆಂಟಿಲೇಟರ್ , ಬೆಡ್ ಗಾಗಿ ಹತ್ತಾರು ಕರೆ ಬರುತ್ತವೆ. ನಾನು ಯಾರಿಗೂ ಇನ್ಪ್ಲೂಯೆನ್ಸ್ ಮಾಡಿಲ್ಲ. ಯಾಕೆಂದರೆ ನನ್ನ ಇನ್ಫ್ಲೂಯೆನ್ಸ್ ನಿಂದ ಇನ್ನೊಬ್ಬ ರೋಗಿಗೆ ತೊಂದರೆ ಆಗಬಾರದು ಅಂತ. ಇದು ನನ್ನ ಬದ್ಧತೆ. ಇದು ನನ್ನ ಕಾರ್ಯವೈಖರಿ ಎಂದು ಸಚಿವ ಎಸ್. ಟಿ ಸೋಮಶೇಖರ್ ತಿರುಗೇಟು ನೀಡಿದರು. …. . . : .. , . 29, 2021 (..): . . - ?! - .. .. ! “ 11 . , .. . ,” .“ . . ,” .“ . , . ,” .: - / .. / / / . . : . - - --