ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ರಾಜ್ಯದ ಜನತೆ ಬಳಿ ಸಿಎಂ ಬಿಎಸ್ ವೈ ಮನವಿ… ಬೆಂಗಳೂರು,ಏಪ್ರಿಲ್,28,2021(..):ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ಇಂದಿನಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಯಲ್ಲಿದ್ದು ಈ ನಡುವೆ ಸರ್ಕಾರಕ್ಕೆ ಸಹಕರಿಸಿ ಎಲ್ಲರೂ ಮನೆಯಲ್ಲೇ ಇರಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಕೊರೊನಾ ನಿಯಂತ್ರಣಕ್ಕಾಗಿರ ಎರಡು ವಾರಗಳ ಕಾಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ಮಾರ್ಗಸೂಚಿ ಪಾಲಿಸಿ ಸರ್ಕಾರದೊಂದಿಗೆ ಸಹಕರಿಸಿ. ಎಲ್ಲರೂ ಮನೆಯಲ್ಲೇ ಇರಿ. ಅಗತ್ಯ ಕೆಲಸವಿದ್ದರೇ ಮಾತ್ರ ಹೊರಬನ್ನಿ ನಾವೆಲ್ಲರೂ ಕೊರೋನಾ ವಿರುದ್ಧ ಹೋರಾಡೋಣಾ ಎಂದು ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಜನರ ಬಳಿ ಮನವಿ ಮಾಡಿದ್ದಾರೆ. : - - - –