ಕೊರೋನಾ ಹಿನ್ನೆಲೆ: ನಿಗದಿಗೊಳಿಸಿದ್ಧ ವಿವಿಧ ಪರೀಕ್ಷೆಗಳನ್ನ ಮುಂದೂಡಿದ ಮೈಸೂರು ವಿವಿ… ಮೈಸೂರು,ಏಪ್ರಿಲ್,27,2021(..):ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಇದನ್ನ ತಡೆಗಟ್ಟುವ ಸಲುವಾಗಿ ಮೇ 11 ರವರೆಗೆ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಗದಿಗೊಳಿಸಿದ್ಧ ವಿವಿಧ ಪರೀಕ್ಷೆಗಳನ್ನ ಮೈಸೂರು ವಿಶ್ವ ವಿದ್ಯಾನಿಲಯ ಮುಂದೂಡಿದೆ. ಈ ಕುರಿತು ಮೈಸೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಆದೇಶ ಹೊರಡಿಸಿದ್ದಾರೆ. ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಕಾರಣದಿಂದಾಗಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಈಗಾಗಲೇ ನಿಗದಿಗೊಳಿಸಿದ್ಧ ಬಿ.ಆರ್ಕ್, ಬಿ.ಪಿ.ಎಡ್ ಹಾಗೂ ಎಲ್ಲಾ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಪರಿಷ್ಕೃತ ದಿನಾಂಕಗಳನ್ನು ಮುಂದೆ ಪ್ರಕಟಿಸಲಾಗುವುದು ಎಂದು ಕುಲಸಚಿವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. : – - –