ಮಾಜಿ ಸಂಸದ ಎಸ್.ಬಿ. ಸಿದ್ನಾಳ ನಿಧನ…. ಬೆಳಗಾವಿ,ಏಪ್ರಿಲ್,27,2021(..): ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಎಸ್.ಬಿ.ಸಿದ್ನಾಳ ಇಂದು ಬೆಳಗಿನ ಜಾವ ಬೆಳಗಾವಿಯ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದ ಎಸ್. ಬಿ. ಸಿದ್ನಾಳ್ ಅವರು ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಸಾಣಿಕೊಪ್ಪದವರು. ಅವರ ಅಂತ್ಯಕ್ರಿಯೆ ಸಾಣಿಕೊಪ್ಪದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಉದ್ಯಮಿಗಳಾದ ಶಶಿಕಾಂತ ಸಿದ್ನಾಳ ಹಾಗೂ ಶಿವಕಾಂತ ಸಿದ್ನಾಳ ಎಸ್.ಬಿ.ಸಿದ್ನಾಳ್ ಅವರ ಪುತ್ರರು. : - - . –-