ಪ್ರಧಾನಿ ಮೋದಿ ದೂರವಾಣಿ ಕರೆ: ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು… ಬೆಂಗಳೂರು,ಏಪ್ರಿಲ್,27,2021(..):ಕೊರೋನಾ ನಿಯಂತ್ರಣ ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರಬರೆದು ನೀಡಿದ್ದ ಸಲಹೆಯನ್ನ ಪ್ರಧಾನಿ ನರೇಂದ್ರ ಮೋದಿ ಪರಿಗಣಿಸುವುದಾಗಿ ತಿಳಿಸಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದು ಕೊರೋನಾ ಕಂಟ್ರೋಲ್ ಕುರಿತು ಸಲಹೆ ನೀಡಿದ್ದರು. ಇದೀಗ ಹೆಚ್.ಡಿ ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಸಲಹೆ ಪರಿಗಣಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೋದಿ ಅವರು ಕೆಲ ನಿಮಿಷಗಳ ಹಿಂದೆ ಕರೆ ಮಾಡಿದ್ದರು. ನಿನ್ನೆ ನಾನು ಬರೆದ ಪತ್ರ ಓದಿರುವುದಾಗಿ ತಿಳಿಸಿದರು. ನನ್ನ ಸಲಹೆಯನ್ನ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅವರ ಕಾಳಜಿ, ತ್ವರಿತ ಪ್ರತಿಕ್ರಿಯೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೆಚ್ ಡಿಡಿ ಟ್ವಿಟ್ ಮಾಡಿದ್ದಾರೆ. … : , . 27, 2021 (..): .. ’ -19 , ’ . .. . .. . .. . “ . . ,” .: / .. / / : –- - – – .