ಈಗಾಗಲೇ ಘೋಷಣೆಯಾಗಿರುವ ಚುನಾವಣೆ ನಡೆಯುತ್ತೆ- ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ… ಬೆಂಗಳೂರು,ಏಪ್ರಿಲ್,26,2021(..):ರಾಜ್ಯದಲ್ಲಿ ಹೆಚ್ಚಳವಾಗಿರುವ ಕೊರೋನಾ ಸೋಂಕು ತಡೆಯಲು ರಾಜ್ಯದಲ್ಲಿ ನಾಳೆಯಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಘೋಷಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ನಡೆಯಬೇಕಿರುವ ಚುನಾವಣೆ ಮುಂದೂಡಿಕೆ ಬಗ್ಗೆ ಗೃಹ ಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈಗಾಗಲೇ ಘೋಷಣೆಯಾಗಿರುವ ಚುನಾವಣೆ ನಡೆಯುತ್ತದೆ. ಬಳ್ಳಾರಿ ಮತ್ತು ರಾಮನಗರ ನಗರಸಭೆ ಚುನಾವಣೆಗಳು ನಡೆಯುತ್ತದೆ. ನಂತರದ ಚುನಾವಣೆಗಳನ್ನ ಮುಂದೂಡಿಕೆ ಮಾಡಲಾಗುತ್ತದೆ. ಮುಂದೂಡಲು ಚುನಾವಣಾ ಆಯೋಗಕ್ಕೆ ಸರ್ಕಾರ ಶಿಫಾರಸ್ಸು ಮಾಡಿದೆ ಎಂದು ತಿಳಿಸಿದರು. ಕೋವಿಡ್ ನಿಯಂತ್ರಣಕ್ಕಾಗಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ನಾಳೆ ರಾತ್ರಿ 9 ರಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರಿಂದಾಗಿ ನಾಳೆ ಸಂಜೆ 9 ರಿಂದ 14 ದಿನಗಳ ಕಾಲ ಸಾರಿಗೆ ಸಂಚಾರ ಸೇರಿ ಎಲ್ಲವೂ ಬಂದ್ ಆಗಲಿದೆ. ಕೃಷಿ, ಉತ್ಪಾದನಾ ವಲಯಕ್ಕೆ ವಿನಾಯಿತಿ ನೀಡಲಾಗಿದೆ. : -- - –- -