ಕೊರೋನಾ ನಿಯಂತ್ರಣ ಕುರಿತು ಮಹತ್ವ ಸಚಿವ ಸಂಪುಟ ಸಭೆ: ಸಚಿವ ಆರ್.ಅಶೋಕ್ ಕೊಟ್ಟ ಸಲಹೆ ಏನು ಗೊತ್ತೆ…? ಬೆಂಗಳೂರು,ಏಪ್ರಿಲ್ ,26,2021(..):ಕೊರೋನಾ ನಿಯಂತ್ರಣ ಕುರಿತು ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಕೊರೋನಾ ತಡೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸಿಎಂ ಬಿಎಸ್ ವೈ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಕುರಿತು ಕಂದಾಯ ಸಚಿವ ಆರ್. ಅಶೋಕ್ ಸಲಹೆ ನೀಡಿದ್ದಾರೆ. ಕೊರೋನಾ ತಡೆಗಾಗಿ ಬೆಂಗಳೂರಿನ ವಲಯಗಳನ್ನ ಮರು ವಿಭಜನೆ ಮಾಡಿ ಎಂದು ಆರ್.ಅಶೋಕ್ ತಿಳಿಸಿದ್ದಾರೆ. ಕೆಲ ವಲಯಗಳಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಅಧಿಕಾರಿಗಳಿಗೆ ಕೆಲಸ ಒತ್ತಡ ಹೆಚ್ಚಿರುತ್ತದೆ. ಅದ್ದರಿಂದ ವಲಯಗಳನ್ನ ಮರುವಿಭಜನೆ ಮಾಡಬೇಕು. ಈ ರೀತಿ ಮಾಡಿದರೇ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಬಹುದು ಎಂದು ತಿಳಿಸಿದ್ದಾರೆ. : - - – - - -. .