‘ ಬೆಡ್ ಖಾಲಿ ಇಲ್ಲ ‘ ಬೋರ್ಡ್ ಹಾಕಿದ ಮೈಸೂರಿನ ಕೆ.ಆರ್.ಆಸ್ಪತ್ರೆ..! ಮೈಸೂರು, ಏ.25, 2021 : (.. ): ಕೊರೊನ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನಗರದ ಕೆ.ಆರ್ ಆಸ್ಪತ್ರೆಯಲ್ಲಿ ಇದೀಗ ಹಾಸಿಗೆಗಳ ಅಲಭ್ಯತೆ ಎದುರಾಗಿದೆ.ಸೋಂಕು ಉಲ್ಭಣಗೊಂಡು ತೀವ್ರ ನಿಗಾ ಘಟಕದಲ್ಲಿರುವ ಸೋಂಕಿತರ ಚಿಕಿತ್ಸಗೆ ವೆಂಟಿಲೇಟರ್ ಲಭಿಸುತ್ತಿಲ್ಲ. ಈ ಕಾರಣಕ್ಕಾಗಿಯೇ ಆಸ್ಪತ್ರೆಯ ಆಡಳಿತ ವರ್ಗ, ಆಸ್ಪತ್ರೆ ಬಳಿ ‘ ವೆಂಟಿಲೇಟರ್ ಖಾಲಿ ಇಲ್ಲ ‘ ಎಂದು ಫಲಕ ಹಾಕಿದೆ. ಕರೋನಾ ಸೋಂಕಿತರ ಸಂಖ್ಯೆ ದಿನೇದಿನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂಥ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಬೆಡ್ ಲಭಿಸದೆ ಸೋಂಕಿತರು ಪರಿತಪಿಸುವಂತಾಗಿದೆ. : ----..-