ಐಪಿಎಲ್: ಇಂದು ರಾಯಲ್ ಚಾಲೆಂಜರ್ಸ್-ಚೆನ್ನೈ ಸೂಪರ್ ಕಿಂಗ್ಸ್ ಹೈವೋಲ್ಟೇಜ್ ಮ್ಯಾಚ್ ಬೆಂಗಳೂರು, ಏಪ್ರಿಲ್ 25, 2021 (..):ಐಪಿಎಲ್ ನಲ್ಲಿ ಇಂದು ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಬಳಗದ ನಡುವೆ ಇಂದು ನಡೆಯಲಿದೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಐಪಿಎಲ್ 19 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಸತತ ಐದನೇ ಗೆಲುವಿನ ಬಗ್ಗೆ ಕೊಹ್ಲಿ ಬಳಗ ಕಾರ್ಯತಂತ್ರ ರೂಪಿಸಿದೆ. ಮೂರು ಪಂದ್ಯಗಳಲ್ಲಿ ಜಯಿಸಿರುವ ಚೆನ್ನೈ ತಂಡ ಕೂಡ ಗೆಲುವಿಗಾಗಿ ರಣತಂತ್ರ ರೂಪಿಸಿದೆ. ಹೀಗಾಗಿ ಇಂದು ಅಭಿಮಾನಿಗಳಿಗೆ ರಸದೌತಣ ಗ್ಯಾರಂಟಿಯಾಗಿದೆ.