ಬಿಗ್ ಬಾಸ್ 8ನೇ ಸೀಸನ್’ನಲ್ಲಿ ಸುದೀಪ್ ಸಂಭಾವನೆ ಎಷ್ಟು ಗೊತ್ತಾ!? ಬೆಂಗಳೂರು, ಏಪ್ರಿಲ್ 22, 2021 (..): ಬಿಗ್ ಬಾಸ್ 8ನೇ ಸೀಸನ್​’ನಲ್ಲಿ ಸುದೀಪ್​ ಸಂಭಾವನೆ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಹರಿದಾಡುತ್ತಿವೆ. ಅಂದಹಾಗೆ ಸೀಸನ್​ 1ರಿಂದ ಕನ್ನಡ ಬಿಗ್​ ಬಾಸ್​​ಅನ್ನು ಸುದೀಪ್​ ಅವರೇ ನಡೆಸಿಕೊಡುತ್ತಿದ್ದಾರೆ. ಇದೀಗ ಈ ಸೀಸನ್ ಗೆ ಕಿಚ್ಚ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೊನೆಯ ಐದು ಸೀಸನ್​ಗೆ ಸುದೀಪ್​ 20 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅಂದರೆ, ಒಂದು ಸೀಸನ್​ಗೆ 4 ಕೋಟಿ ರೂಪಾಯಿ ಆಗಲಿದೆ. ಮುಂದಿನ ಸೀಸನ್’ಗಳಿಗೂ​ ಸುದೀಪ್​ ಅವರೇ ಬಿಗ್​ ಬಾಸ್​ ನಡೆಸಿಕೊಡುವ ಸಾಧ್ಯತೆ ಇದೆ. ಸೀಸನ್ ಮುಗಿದ ಕೂಡಲೇ ಮತ್ತೆ 8ರ ಆವೃತ್ತಿ ಕಲರ್ಸ್ ಕನ್ನಡ ಸಿದ್ಧತೆ ಆರಂಭಿಸಿದೆ.