ಅಭಿಮಾನಿಗಳ ‘ಈ ಕಾರ್ಯ’ ಕಂಡು ಭಾವುಕರಾದ ಕಿಚ್ಚ ! ಬೆಂಗಳೂರು, ಏಪ್ರಿಲ್ 21, 2021 (..): ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಈ ಕಾರ್ಯ ಕಂಡು ಭಾವುಕರಾಗಿದ್ದಾರೆ. ಅಂದಹಾಗೆ ಅಭಿಮಾನಿಗಳು ಮಾಡಿದ ಕೆಲಸ ಏನೆಂದರೆ ಸುದೀಪ್ ಆರೋಗ್ಯದಲ್ಲಿ ಚೇತರಿಕೆಗಾಗಿ ದೇವರ ಮೊರೆ ಹೋಗಿದ್ದು… ಹೌದು. ಅಭಿಮಾನಿಗಳ ಈ ನಿಸ್ವಾರ್ಥ ಪ್ರೀತಿ ಕಂಡು ಕಿಚ್ಚ ಭಾವುಕರಾಗಿದ್ದಾರೆ. ಚನ್ನಗಿರಿ ತಾಲೂಕಿನ ಕಿಚ್ಚ ಸುದೀಪ್ ಅಭಿಮಾನಿಗಳು ಕಿಚ್ಚನ ಆರೋಗ್ಯ ಸುಧಾರಿಸಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ವಿಶೇಷಚೇತನ ಅಭಿಮಾನಿ ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿ ಪ್ರಾರ್ಥನೆ ಸಲ್ಲಿಸಿದ್ದ ವೀಡಿಯೋ ಕಂಡು ಸುದೀಪ್ ಭಾವುಕರಾಗಿದ್ದಾರೆ.