ಬರೋಬ್ಬರಿ 905 ಕೋಟಿ ರೂ.ಗೆ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಪಡೆದ ಸ್ಟಾರ್ ಸ್ಪೋರ್ಟ್ಸ್ ಬೆಂಗಳೂರು, ಏಪ್ರಿಲ್ 21, 2021 (..):ಸ್ಟಾರ್ ಸ್ಪೋರ್ಟ್ಸ್‌ ಬರೋಬ್ಬರಿ 905 ಕೋಟಿ ರೂಪಾಯಿಗೆ ಈ ಬಾರಿಯ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಪಡೆದಿದೆ. 5 ವರ್ಷಗಳಿಗೆ (2021ರಿಂದ 2025) 905 ಕೋಟಿ ರುಪಾಯಿಗೆ ಬಿಡ್‌ ಮಾಡಿ ಪ್ರಸಾರ ಹಕ್ಕನ್ನು ಸ್ಟಾರ್‌ ಸಂಸ್ಥೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಮಾಧ್ಯಮ ಪ್ರಸಾರ ಹಕ್ಕನ್ನು ಇ-ಹರಾಜು ನಡೆಸಲಾಗಿತ್ತು. ಹರಾಜಿನ ಮೂಲ ಬೆಲೆ 900 ಕೋಟಿ ರು.ಗೆ ನಿಗದಿ ಮಾಡಲಾಗಿತ್ತು. ಈ ನಡುವೆ ಹರಾಜು ಪ್ರಕ್ರಿಯೆ ಬಗ್ಗೆ ಕೆಲ ಫ್ರಾಂಚೈಸಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಲೀಗ್‌ನ ಮಾಲಿಕತ್ವದಲ್ಲಿ ಶೇ.74 ಪಾಲು ಹೊಂದಿರುವ ಸ್ಟಾರ್‌ ಸಂಸ್ಥೆಯೇ ಹೊಂದಿದೆ.