ಜನರು ಕೋವಿಡ್ ನಿಯಮ ಪಾಲಿಸಿದ್ದರೆ ಲಾಕ್ ಡೌನ್, ಸೀಲ್ ಡೌನ್ ಬೇಕಿರಲಿಲ್ಲ- ಸಚಿವ ಸುಧಾಕರ್… ಬೆಂಗಳೂರು,ಏಪ್ರಿಲ್,20,2021(..):ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಈ ಮಧ್ಯೆ ಜನರು ಸರಿಯಾಗಿ ಕೋವಿಡ್ ನಿಯಮ ಪಾಲಿಸಿದ್ದರೇ ಲಾಕ್ ಡೌನ್, ಸೀಲ್ ಡೌನ್ ಬೇಕಿರಲಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಸುಧಾಕರ್, ಎಲ್ಲರಿಗೂ ಬೆಡ್ ಒದಗಿಸಲು ಆಗುತ್ತಿಲ್ಲ. ವಾಸ್ತವವಾಗಿ ಏನಿದೆಯೋ ಅದನ್ನ ಒಪ್ಪಿಕೊಳ್ಳಬೇಕು. ಜನರು ಸರಿಯಾಗಿ ಕೋವಿಡ್ ನಿಯಮ ಪಾಲಿಸಿದ್ದರೆ ಲಾಕ್ ಡೌನ್, ಸೀಲ್ ಡೌನ್ ಬೇಕಿರಲಿಲ್ಲ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಜನರು ಎಚ್ಚೆತ್ತುಕೊಳ್ಳಲಿಲ್ಲ. ಹೀಗಾಗಿ ಕಠಿಣ ನಿಯಮ ಜಾರಿಗೊಳಿಸಬೇಕಿದೆ ಎಂದರು. ನಾವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಇದು ಯುದ್ಧದ ಸಮಯ. ಕೋವಿಡ್ ನಿಯಂತ್ರಣ ವಿಚಾರದಲ್ಲಿ ಪ್ರತಿಷ್ಟೆ ತೋರಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡುತ್ತೇವೆ. ಜನರ ಜೀವ ಉಳಿಸುವ ಕಡೆ ಹೆಚ್ಚಿನ ಗಮನ ಕೊಡುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು. …. , : , . 20, 2021 (..): “ -- , , ,” . . . . . “ . , , ’ . , . , ,” .“ . . . . ’ ,” .: -19 / / / . . / / : – - - - – - .