ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ. ಪ್ರಧಾನಿಯ ಹೃದಯ ಕರಗುತ್ತಿಲ್ಲ : ರಾಜ್ಯ ಕಾಂಗ್ರೆಸ್ ಕಿಡಿ ಬೆಂಗಳೂರು,ಏಪ್ರಿಲ್,18,2021(..): ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ. ಪ್ರಧಾನಿಯ ಹೃದಯ ಮಾತ್ರ ಕರಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.ದೇಶಾದ್ಯಂತ ಕೊರೊನಾ ಭೀಕರತೆಯನ್ನು ಸೃಷ್ಟಿಸಿದೆ, ಚಿಕಿತ್ಸೆ ಸಿಗದೆ ದೇಶ ಸ್ಮಶಾನವಾಗುತ್ತಿದೆ. ಇದೇ ಹೊತ್ತಿನಲ್ಲಿ ಬಂಗಾಳದ ಚುನಾವಣಾ ಪ್ರಚಾರದಲ್ಲಿ ನಿರತರಾದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು “ಇಷ್ಟೊಂದು ಜನರನ್ನು ಮೊದಲ ಭಾರಿ ನೋಡುತ್ತಿದ್ದಾರಂತೆ, ಬಹಳ ಸಂತೋಷವಾಗುತ್ತಿದೆ” ತನು- ಮನದಲ್ಲಿ ಕ್ರೌರ್ಯದ ವಿಷ ತುಂಬಿಕೊಂಡವರು ಮಾತ್ರ ಹೀಗಿರಲು ಸಾಧ್ಯ ಎಂದು ಆಕ್ರೋಶವ್ಯಕ್ತಪಡಿಸಿದೆ. : --- - -- -