ಮೈಸೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಳ, ಸೋಂಕಿತರ ಸ್ಥಳಗಳಲ್ಲಿ ಸ್ಯಾನಿಟೈಸ್ ಮೈಸೂರು,ಏಪ್ರಿಲ್,18,2021(..) :ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್‌–19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ, ಕುವೆಂಪುನಗರದಲ್ಲಿ ಸೋಂಕಿತರಿರುವ ಸ್ಥಳಗಳಲ್ಲಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ.ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಸೋಂಕಿತರು ಐಸೋಲೇಟೆಡ್ ಗೆ ಅವಕಾಶ ಕಲ್ಪಿಸಲಾಗಿದೆ. ಕುವೆಂಪುನಗರದಲ್ಲಿ ನಾಲ್ಕು ಬೀದಿಯಲ್ಲಿ 17 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಸೋಂಕಿತ ವ್ಯಕ್ತಿಗಳು ಸಂಚರಿಸಿದ ಹಿನ್ನೆಲೆ, ಪಾಲಿಕೆ ವೈದ್ಯಾಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಪೌರಕಾರ್ಮಿಕ ಸಿಬ್ಬಂದಿ ಸ್ಯಾನಿಟೈಸ್ ಮಾಡಿದರು. : ------