ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಅನುಪಮಾ ಪುಚ್ಚಿಮಂಡ ಕೊರೊನಾ ಗೆ ಬಲಿ ಬೆಂಗಳೂರು,ಏಪ್ರಿಲ್,18,2021(..) :ಕೊಡಗು ಮೂಲದ ರಾಜ್ಯದ ಮೊದಲ ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಅನುಪಮಾ ಪುಚ್ಚಿಮಂಡ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.ಕೊರೋನಾ ಸೋಂಕಿಗೆ ತುತ್ತಾಗಿದ್ದ ಅನುಪಮಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ. 50 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಮೂಲದವರಾದ ಅನುಪಮಾ ಅವರು, ರಾಜ್ಯದ ಮೊದಲ ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಹಾಗೂ 50 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದ ದೇಶದ ಮೊದಲ ಮಹಿಳಾ ಅಂಪೈರ್ ಆಗಿ ಗುರುತಿಸಿಕೊಂಡಿದ್ದರು. : ---- --