ಕ್ಯಾಪ್ಟನ್ ಕೂಲ್ ಧೋನಿಗೆ ನಿಷೇಧದ ಆತಂಕ! ಬೆಂಗಳೂರು, ಏಪ್ರಿಲ್ 17, 2021 (..): ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಧೋನಿ ಪಡೆ ಸೋಲನುಭವಿಸಿತ್ತು. ಆ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ ಪೂರೈಸದೇ ಇದ್ದಿದ್ದಕ್ಕೆ ಧೋನಿ 12 ಲಕ್ಷ ರೂ. ದಂಡ ಪಾವತಿ ಮಾಡಬೇಕಾಗಿ ಬಂದಿತ್ತು. ಇದೀಗ ಮತ್ತೊಂದು ಆತಂಕ ಧೋನಿಗೆ ಎದುರಾಗಿದೆ. ಮುಂದಿನ ಪಂದ್ಯದಲ್ಲೂ ಧೋನಿ ಇದೇ ತಪ್ಪು ಮುಂದುವರಿಸಿದರೆ ಒಂದು ಪಂದ್ಯದ ನಿಷೇಧದ ಶಿಕ್ಷೆ ಅನುಭವಿಸಬೇಕಾಗಬಹುದು. ಬಿಸಿಸಿಐ ನಿಯಮಗಳ ಪ್ರಕಾರ ಎರಡನೇ ಬಾರಿಯೂ ಅದೇ ತಪ್ಪು ಮಾಡಿದರೆ ತಂಡದ ನಾಯಕನಿಗೆ ನಿಷೇಧದ ಶಿಕ್ಷೆ ನೀಡಬಹುದಾಗಿದೆ. ಹೀಗಾಗಿ ‍ಧೋನಿ ಒತ್ತಡದಲ್ಲಿ ಸಿಲುಕಿದ್ದಾರೆ.