ವಿಪಕ್ಷಗಳ ಷಡ್ಯಂತ್ರಕ್ಕೆ ಬಲಿಯಾಗದಿರೋಣ : ರಾಜ್ಯ ಬಿಜೆಪಿ ಟ್ವೀಟ್ ಬೆಂಗಳೂರು,ಏಪ್ರಿಲ್,17,2021(..) :ಸುಳ್ಳುಗಳ ಮೂಲಕ ದೇಶದ ಜನತೆಗೆ ತಪ್ಪು ಮಾಹಿತಿ ತಲುಪಿಸುತ್ತಿರುವ ವಿಪಕ್ಷಗಳ ಷಡ್ಯಂತ್ರಕ್ಕೆ ಬಲಿಯಾಗದಿರೋಣ. ಕಾಂಗ್ರೆಸ್‌ ಹಿಂದೆಯೂ ದೇಶದ ಪರವಾಗಿ ನಿಂತಿಲ್ಲ, ಮುಂದೆಯೂ ನಿಲ್ಲುವುದಿಲ್ಲ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿದೆ ಎಂಬ ವದಂತಿ ಸುಳ್ಳು ಮಾಹಿತಿಯಾಗಿದ್ದು, ಇದನ್ನು ನಂಬದಿರೋಣ ಎಂದು ಹೇಳಿದೆ. ಕೋವಿಡ್‌ ವಿರುದ್ಧ ರಾಜ್ಯ ಬಿಜೆಪಿ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದುವರೆಗೆ 64 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಲಸಿಕೆ ಕೊರತೆ ಎಂಬ ಸುಳ್ಳು ಮಾಹಿತಿಗೆ ಸಾರ್ವಜನಿಕರು ಬಲಿಯಾಗದೆ ಸ್ವಯಂಪ್ರೇರಿತರಾಗಿ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. : ---’- --