ದೆಹಲಿ,ಇತರೆ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಸ್ವಾಗತಾರ್ಹ, ನಾಳೆ ಚರ್ಚೆ ಮಾಡಿ ರಾಜ್ಯದಲ್ಲಿ ಕ್ರಮ : ಸಚಿವ ಡಾ.ಕೆ.ಸುಧಾಕರ್ ಬೆಂಗಳೂರು,ಏಪ್ರಿಲ್,15,202(..) :ದೆಹಲಿ,ಇತರೆ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಕ್ರಮ ಸ್ವಾಗತಾರ್ಹ. ಅಲ್ಲಿಯೂ ಸೋಂಕಿನ ಪ್ರಕರಣ ಹೆಚ್ಚಿದೆ. ನಮ್ಮಲ್ಲೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಾಳೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.ಸದಾಶಿವನಗರ ಗ್ರಾಮೀಣ ಸೇವೆಗೆ ಹೋಗಲು ವೈದ್ಯರ ನಿರಾಕರಣೆ ಹಿನ್ನೆಲೆ, ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ವೈದ್ಯ ವಿದ್ಯಾರ್ಥಿಗಳನ್ನು ಗ್ರಾಮೀಣ ಸೇವೆಗೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯದಿಂದ ಕುಂಬ ಮೇಳದ ಪವಿತ್ರ ಸ್ನಾನಕ್ಕೆ ಹೋಗಿದ್ದಾರೆ. ಕುಂಬ ಮೇಳದಲ್ಲಿ ಕೊರೊನಾ ಹೆಚ್ಚಿರೋದು ಕಂಡುಬಂದಿದೆ. ಎರಡು ಸಾವಿರ ಸೋಂಕು ಅಲ್ಲಿ ಕಂಡು ಬಂದಿದೆ. ಅಲ್ಲಿಂದ ಬಂದ ಮೇಲೆ ಪ್ರತ್ಯೇಕವಾಗಿರಬೇಕು, ಮನೆಗಳಲ್ಲಿ ಕುಟುಂಬ ಸದಸ್ಯರಿಂದ ಅಂತರ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಜೊತೆಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕು. ಟೆಸ್ಟ್ ನಲ್ಲಿ ನೆಗೆಟೀವ್ ಬಂದರೆ ಸಮಸ್ಯೆಯಿಲ್ಲ. ಇಲ್ಲವಾದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದ್ದಾರೆ. : - ---------..