ಮುಷ್ಕರ ಬೆಂಬಲಿಸುವಂತೆ ಸಾರಿಗೆ ನೌಕರರು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿ ಮತ್ತೊಂದು ಪತ್ರ ಬರೆದ ನಟ ಯಶ್… ಬೆಂಗಳೂರು,ಏಪ್ರಿಲ್,15,2021(..):6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ಮುಷ್ಕರ ಬೆಂಬಲಿಸುವಂತೆ ಸಾರಿಗೆ ನೌಕರರ ಒಕ್ಕೂಟ ಬರೆದಿದ್ದ ಪತ್ರಕ್ಕೆ ನಟ ಯಶ್ ಪ್ರತಿಕ್ರಿಯಿಸಿ ಮತ್ತೊಂದು ಪತ್ರ ಬರೆದಿದ್ದಾರೆ. ಸಾರಿಗೆ ನೌಕರರ ಪತ್ರಕ್ಕೆ ಪ್ರತಿಕ್ರಿಯಿಸಿ ನಟ ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಪತ್ರವನ್ನ ಬರೆದಿದ್ದು ಪತ್ರವನ್ನು ನಟ ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ..! ನ್ಯಾಯಕ್ಕಾಗಿ ಹೋರಾಡುತ್ತಿರುವ ಸಾರಿಗೆ ನೌಕರರ ಕೂಗು, ಬಸ್ಸನ್ನು ಅವಲಂಬಿಸಿರುವ ಮಧ್ಯಮ ವರ್ಗದ ಅಳಲು ನನ್ನನ್ನು ಬಹಳ ಕಾಡುತ್ತಿದೆ. ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ಬಳಿ ಮಾತನಾಡಿದ್ದೇನೆ. ಸಾರಿಗೆ ನೌಕರರ ವೇತನ ತಾರತಮ್ಯವನ್ನು ಕೂಡಲೇ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ನಟ ಯಶ್ ತಿಳಿಸಿದ್ದಾರೆ. ನಾನು ಇಂದು ಏನೇ ಆಗಿದ್ದರೂ ಅದಕ್ಕೂ ಮೊದಲು ಒಬ್ಬ ಚಾಲಕನ ಪುತ್ರ. ನಿಮ್ಮ ಸಮಸ್ಯೆಗಳನ್ನು ನಾನು ಹತ್ತಿರದಿಂದ ಬಲ್ಲವನು. ಸಮಸ್ಯೆಗೆ ಮತ್ತೊಂದು ಸಮಸ್ಯೆ ಪರಿಹಾರವಲ್ಲ. ಮುಕ್ತ ಮನಸ್ಸುಗಳ ಬಿಚ್ಚು ಮಾತುಕತೆ ಸಮಸ್ಯೆಗೆ ಪರಿಹಾರ ಎಂದು ಪತ್ರದಲ್ಲಿ ತಿಳಿಸಿದ್ದಾರೆ. … . , . 15, 2021 (..): 6th 9th . , . , .“ …! - . .”“ , . -. . . ,” .: / / : - - – - -.