ಸರ್ಕಾರ ರಾಜ್ಯವನ್ನು ಇದೆಂತಹ ದುರ್ಗತಿಗೆ ತಳ್ಳಿದೆ : ರಾಜ್ಯ ಕಾಂಗ್ರೆಸ್ ಟೀಕೆ ಬೆಂಗಳೂರು,ಏಪ್ರಿಲ್,15,2021(..) :ಸರ್ಕಾರ ರಾಜ್ಯವನ್ನು ಇದೆಂತಹ ದುರ್ಗತಿಗೆ ತಳ್ಳಿದೆ. ಸೋಂಕಿತ ಸರ್ಕಾರದ ದುರಾಡಳಿತದಲ್ಲಿ ಎಲ್ಲರೂ ಸಂಬಳವಿಲ್ಲ ಎಂದು ಗೋಳಾಡುವವರೇ ಆಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ. ಸ್ಮಶಾನಗಳಲ್ಲಿ ದುಡಿಯುವ ಕಾರ್ಮಿಕರಿಗೆ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ನಿಗದಿ ಮಾಡಿದ್ದ 10,500 ಸಾವಿರ ಸಂಬಳವನ್ನು ಕಳೆದ 10 ತಿಂಗಳಿಂದ ನೀಡಲಿಲ್ಲ, ಪ್ರೋತ್ಸಾಹಧನವೂ ಇಲ್ಲ ಎಂದು ಕಿಡಿಕಾರಿದೆ. : -------