ರಂಜಾನ್ ಆಚರಣೆ : ರಾಜ್ಯ ಸರ್ಕಾರದಿಂದ ಗೈಡ್ ಲೈನ್ಸ್ ಬಿಡುಗಡೆ ಬೆಂಗಳೂರು,ಏಪ್ರಿಲ್,13,2021(..) :ಕೊರೊನಾ ಹಿನ್ನೆಲೆ ರಂಜಾನ್ ಆಚರಣೆಗೆ ರಾಜ್ಯ ಸರ್ಕಾರವು ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕಂಟೇನ್ಮೆಂಟ್ ಜೋನ್ ಮಸೀದಿಗಳನ್ನು ಬಂದ್ ಮಾಡಲಾಗುವುದು. ಉಳಿದ ಮಸೀದಿಗಳಲ್ಲಿ ಮಾತ್ರವೇ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.ಸಾಮೂಹಿಕ ಪ್ರಾರ್ಥನೆ ಸಂದರ್ಭ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಸ್ವಚ್ಛತೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ವೈಯಕ್ತಿಕವಾಗಿ ಕಾರ್ಪೆಟ್ ಬಳಕೆ ಮಾಡಬೇಕು. ಉಪವಾಸ ಬಿಡುವಾಗ ಮಸೀದಿಗೆ ಆಹಾರ ತರಬಾರದು. ಕಂಟೇನ್ಮೆಂಟ್ ಜೋನ್ ನಲ್ಲಿರುವ ಮಸೀದಿಗಳಲ್ಲಿ ನಮಾಜ್ ಮಾಡುವುದಕ್ಕೆ ಮುಂದಿನ ಆದೇಶದವರೆಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿದೆ. : ---- -