ಯುಗಾದಿಯಂದು ಶುಭಾರಂಭ! ಸೋಷಿಯಲ್ ಮೀಡಿಯಾ ಖಾತೆ ತೆರೆದ ಕ್ರೇಜಿಸ್ಟಾರ್ ಬೆಂಗಳೂರು, ಏಪ್ರಿಲ್ 13, 2021 (..):ನಟ, ಕ್ರೇಜಿಸ್ಟಾರ್ ರವಿಚಂದ್ರನ್ ಫೇಸ್‌ಬುಕ್, ಟ್ವಿಟ್ಟರ್‌, ಇನ್ ಸ್ಟಾಗ್ರಾಂ ಖಾತೆ ತೆರೆದಿದ್ದಾರೆ! ಹೌದು. ಯುಗಾದಿ ಹಬ್ಬದಂದು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ತಮ್ಮ ವಿಷಯಗಳನ್ನು ಹಂಚಿಕೊಳ್ಳಲು ರವಿಚಂದ್ರನ್ ಕೊನೆಗೂ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ‘1 1nly ’ ಹೆಸರಿನ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ರವಿಚಂದ್ರನ್ ಯುಗಾದಿ ಹಬ್ಬವಾದ ಇಂದು ಚಾನೆಲ್‌ ಅನ್ನು ಬಿಡುಗಡೆ ಮಾಡಿದ್ದಾರೆ. ವೀರಸ್ವಾಮಿ ಅವರಿಗೆ ಗೌರವ ಸಲ್ಲಿಸಿರುವ ರವಿಚಂದ್ರನ್, ಮೊದಲ ದಿನವೇ ಕೆಲವಾರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲೂ ಕ್ರೇಜಿಸ್ಟಾರ್ ಖಾತೆ ತೆರೆದಿದ್ದು, ಮೊದಲ ದಿನವೇ ನೂರಾರು ಮಂದಿ ಫಾಲೋ ಮಾಡುತ್ತಿದ್ದಾರೆ.