ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ ಬೆಂಗಳೂರು,ಏಪ್ರಿಲ್,13,2021(..) :ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಎಚ್‌.ಎಸ್‌.ಆರ್‌.ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡಿನ ಮೊಹಮ್ಮದ್ ಮುಸ್ತಾಕ್ (31), ಮೊಹ್ಮದ್ ಆಶೀಕ್ (19), ದಕ್ಷಿಣ ಕನ್ನಡ ಜಿಲ್ಲೆಯ ಸಮೀರ್ (28) ಹಾಗೂ ಮೊಹಮ್ಮದ್ ಅಫ್ರಿದಿ (23) ಬಂಧಿತರು. ಆರೋಪಿಗಳಿಂದ 5 ಲಕ್ಷ ಮೌಲ್ಯದ 48 ಕೆ.ಜಿ. ಗಾಂಜಾ, 45 ಲಕ್ಷ ಮೌಲ್ಯದ 1.34 ಕೆ.ಜಿ ಹ್ಯಾಷ್‌ ಆಯಿಲ್, ಕೃತ್ಯಕ್ಕೆ ಬಳಸುತ್ತಿದ್ದ ತೂಕದ ಯಂತ್ರ, ಸ್ಲೀಪ‍ರ್ ಕೋಚ್ ಬಸ್, ಬೊಲೆರೋ ವಾಹನ, 4,700 ನಗದು ಜಪ್ತಿ ಮಾಡಲಾಗಿದೆ ಎಂದಿದ್ದಾರೆ. ಆರೋಪಿಗಳು ಹೊರಗಿನಿಂದ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ತಂದು ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಮಾದಕವಸ್ತುಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್) ಪ್ರಕರಣ ದಾಖಲಿಸಲಾಗಿದೆ. : ----