ರಾಜ್ಯದಲ್ಲಿಂದು 9,579 ಕೊರೊನಾ ವೈರಸ್ ಪ್ರಕರಣಗಳು ಪತ್ತೆ….. ಬೆಂಗಳೂರು,ಏಪ್ರಿಲ್,12,2021(..)ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, 6 ನಗರಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನಡುವೆ ಇಂದು 9,579 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇಂದು 9,579 ಹೊಸ ಕೋವಿಡ್ ಪ್ರಕರಣ ಪತ್ತೆಯಾಗುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10,74,869 ಕ್ಕೆ ಏರಿಕೆಯಾಗಿದೆ. 2,767 ಮಂದಿ ಇಂದು ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 9,85,924 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 75,985 ಕ್ಕೆ ಏರಿಕೆಯಾಗಿದೆ. ಕೊರೋನಾಗೆ ಇಂದು 52 ಮಂದಿ ಬಲಿಯಾಗಿದ್ದು, ರಾಜ್ಯದಾದ್ಯಂತ ಇಲ್ಲಿಯವರೆಗೆ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,941ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಕೊರೋನಾ ಪ್ರಕರಣ ಜಿಲ್ಲಾವಾರು ಪಟ್ಟಿ ಹೀಗಿದೆ…. ಬಾಗಲಕೋಟೆ 55 ಬಳ್ಳಾರಿ 132 ಬೆಳಗಾವಿ 39 ಬೆಂಗಳೂರು ಗ್ರಾಮಾಂತರ 192 ಬೆಂಗಳೂರು ನಗರ 6,387 ಬೀದರ್ 465 ಚಾಮರಾಜನಗರ 39 ಚಿಕ್ಕಬಳ್ಳಾಪುರ 120 ಚಿಕ್ಕಮಗಳೂರು 57 ಚಿತ್ರದುರ್ಗ 22 ದಕ್ಷಿಣಕನ್ನಡ 73 ದಾವಣಗೆರೆ 40 ಧಾರವಾಡ 91 ಗದಗ 29 ಹಾಸನ 113 ಹಾವೇರಿ 36 ಕಲಬುರಗಿ 335 ಕೊಡಗು 24 ಕೋಲಾರ 96 ಕೊಪ್ಪಳ 31 ಮಂಡ್ಯ 86 ಮೈಸೂರು 362 ರಾಯಚೂರು 70 ರಾಮನಗರ 64 ಶಿವಮೊಗ್ಗ 43 ತುಮಕೂರು 239 ಉಡುಪಿ 101 ಉತ್ತರಕನ್ನಡ 64 ವಿಜಯಪುರ 122 ಯಾದಗಿರಿ 52 : 9,579 – - –-