ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ವಿಜಯ್ ಕುಲಕರ್ಣಿ ಕಾರು: ಇಬ್ಬರು ಸಾವು…. ಧಾರವಾಡ,ಏಪ್ರಿಲ್,12,2021(..):ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಸಹೋದರ ವಿಜಯ್‌ ಕುಲಕರ್ಣಿ ಕಾರು ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಧಾರವಾಡದ ಕೆವಿಜಿ ಬ್ಯಾಂಕ್‌ ಎದುರು ಈ ಘಟನೆ ನಡೆದಿದೆ. ಶೇಖರ್ ಮತ್ತು ಚರಣ್ ನಾಯಕ್ ಮೃತಪಟ್ಟವರು ಎನ್ನಲಾಗಿದೆ. ವಿಜಯ್ ಕುಲಕರ್ಣಿ ಚಲಾಯಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದು ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ 6 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಮುತ್ತಿಗೆ ಹಾಕುತ್ತಿದ್ದಂತೆ ವಿಜಯ್ ಕುಲಕರ್ಣಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಧಾರವಾಢ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - - --