ಹೆಲಿಪ್ಯಾಡ್ ನಿರ್ಮಿಸಲು, ಮರಗಳನ್ನು ಕಡಿಯುವ ನಿರ್ಧಾರ ತಕ್ಷಣ ಕೈಬಿಡಿ- ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ ಬೆಂಗಳೂರು,ಏಪ್ರಿಲ್,12,2021(..): ಮೈಸೂರಿನ ಲಲಿತಮಹಲ್ ಅರಮನೆಗಾಗಿ ಹೆಲಿಪ್ಯಾಡ್ ನಿರ್ಮಿಸಲು 600ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರವನ್ನು ಬಿಜೆಪಿ ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ಲಲಿತಮಹಲ್ ಅರಮನೆಗಾಗಿ ಹೆಲಿಪ್ಯಾಡ್ ನಿರ್ಮಿಸಲು 600ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ನನ್ನ ಮೈಸೂರಿನ ಜನತೆಯ ಜೊತೆ ನಾನೂ ಇದ್ದೇನೆ ಎಂದು ತಿಳಿಸಿದ್ದಾರೆ. ಕೃಪೆ- : -------- -