ಸಾರಿಗೆ ನೌಕರರ ಮುಷ್ಕರದ ನಡುವೆ ರಾಜ್ಯದಲ್ಲಿ ಸರ್ಕಾರ ಬಸ್ ಸಂಚಾರ… ಬೆಂಗಳೂರು,ಏಪ್ರಿಲ್,12,2021(..):6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯದಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಮುಷ್ಕರದ ನಡುವೆಯೂ ರಾಜ್ಯದಲ್ಲಿ ಸರ್ಕಾರ ಬಸ್ ಸಂಚಾರ ಆರಂಭಗೊಂಡಿದ್ದು, ಬೆಳಿಗ್ಗೆ 8 ಗಂಟೆ ವೇಳೆಗೆ ಸುಮಾರು 1282 ಸರ್ಕಾರಿ ಬಸ್ ಗಳು ಕಾರ್ಯಾಚರಣೆ ನಡೆಸಿವೆ. ಈ ಕುರಿತು ಕೆ ಎಸ್ ಆರ್ ಟಿ ಸಿ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು 8 ಗಂಟೆಯವೇಳೆಗೆ ರಾಜ್ಯಾಧ್ಯಂತ ಕೆಎಸ್ ಆರ್ ಟಿಸಿ 601 ಬಸ್ ಗಳು, ಬಿಎಂಟಿಸಿ 184 ಬಸ್ ಗಳು, ಎನ್ ಇಕೆಆರ್ ಟಿಸಿ 327 ಬಸ್ ಗಳು, ಎನ್ ಡಬ್ಲ್ಯುಕೆಆರ್ ಟಿಸಿ 170 ಬಸ್ ಗಳು ಸೇರಿದಂತೆ ಒಟ್ಟು 1282 ಬಸ್ ಗಳು ಸಂಚಾರ ಆರಂಭಿಸಿರುವುದಾಗಿ ತಿಳಿಸಿದೆ. ಈ ಮಧ್ಯೆ ಸರ್ಕಾರಿ ಬಸ್ ಗಳು ಕಡಿಮೆ ಸಂಖ್ಯೆಯಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಯುಗಾದಿ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ಹೋಗುವ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. …. . , . 12, 2021 (..): ’ . ., . 1282 8 . , 1282 601 , 184 , 327 , 170 8 . .: / / 8 / 1282 / : –- -