ಸೋನಿಯಾ ಗಾಂಧಿ ಅಭಿಮಾನಿ ಆತ್ಮಹತ್ಯಗೆ ಯತ್ನ..! ಹೊಸದಿಲ್ಲಿ, ಮೇ.20, 2024: (..) ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಭಿಮಾನಿ ಆತ್ಮಹತ್ಯಗೆ ಯತ್ನಿಸಿದ ಘಟನೆ ನಡೆದಿದೆ. ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಅವರ ನಿವಾಸದ ಸಮೀಪ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಆತ್ಮಾಹುತಿಗೆ ಯತ್ನಿಸಿದ ಘಟನೆಗಳು ನಡೆದಿವೆ. ಸೋನಿಯಾ ಅವರ ನಿವಾಸದ ಹೊರಗೆ ಮಹಿಳಾ ಅಭಿಮಾನಿಯೊಬ್ಬರು ತಮ್ಮ ಮೈಮೇಲೆ ಬೆಂಕಿ ಹಚ್ಚಿಕೊಂಡರೆ, ಹೈದರಾಬಾದಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಯರು ನಡೆಸಿದ ಆತ್ಮಾಹುತಿ ಯತ್ನವನ್ನು ವಿಫಲಗೊಳಿಸಲಾಯಿತು. ಗಾಬರಿ ಆಗಬೇಡಿ , ಈ ಘಟನೆ ನಡೆದಿರುವುದು ಮೇ ೨೦ ರಂದು ನಿಜ. ಆದರೆ 1999 ರಂದು. ಅಂದ್ರೆ ಸರಿಯಾಗಿ ಇಂದಿಗೆ 25 ವರ್ಷಗಳ ಹಿಂದೆ ಈ ಘಟನೆ ನಡೆದಿರುವುದು. ಕನ್ನಡದ ಜನಪ್ರಿಯ ದಿನಪತ್ರಿಕೆ ಪ್ರಜವಾಣಿಯ ʼ 25 ವರ್ಷಗಳ ಹಿಂದೆ ʼ ಕಾಲಂನಲ್ಲಿ ಈ ಸುದ್ಧಿ ಪ್ರಕಟವಾಗಿದೆ. : , , , . : , ’ , . ’ , 20. 1999. 25 . ’25 ’ .