ಕೊರೋನಾ ನಡುವೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಕೋಟಿ ಕೋಟಿ ಆದಾಯ… ಮೈಸೂರು,ಏಪ್ರಿಲ್,11,2021(..):ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು, ರಾಜ್ಯದ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ ಕೊರೋನಾ ನಡುವೆಯು ಮೈಸೂರಿನ ಚಾಮುಡೇಶ್ವರಿ ಸನ್ನಿಧಿಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ. ಮೈಸೂರು ಚಾಮುಂಡಿ ಬೆಟ್ಟ ದೇವಾಲಯದ ಮಾರ್ಚ್ ತಿಂಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ 1 ಕೋಟಿ 68 ಲಕ್ಷದ 38 ಸಾವಿರದ 320 ರೂ ಸಂಗ್ರಹವಾಗಿದೆ. ನೋಟುಗಳಿಂದ 1 ಕೋಟಿ 65 ಲಕ್ಷದ 38 ಸಾವಿರದ 888 ರೂ. ನಾಣ್ಯಗಳಿಂದ 3 ಲಕ್ಷದ 27 ಸಾವಿರದ 320 ರೂ. ಸಂಗ್ರಹವಾಗಿದೆ. ಈ ಮೂಲಕ ಕೊರೋನಾ ನಡುವೆಯೂ ಸನ್ನಿಧಿಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ. : –-- -- -.