ಕನ್ನಡ ವಿರೋಧಿ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು : ಸೈಯದ್ ಇಸಾಕ್ ಮೈಸೂರು,ಏಪ್ರಿಲ್,10,2021(..) :ಇದೇ ಜಾಗದಲ್ಲಿ ನಾನು ಮತ್ತೆ ಕನ್ನಡದ ಗ್ರಂಥಾಲಯ ಕಟ್ಟೆ ಕಟ್ಟುತ್ತೇನೆ. ಕನ್ನಡ ವಿರೋಧಿ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕನ್ನಡ ಗ್ರಂಥಾಲಯ ನಿರ್ಮಿಸಿದ್ದ ಸೈಯದ್ ಇಸಾಕ್ ಆಕ್ರೋಶವ್ಯಕ್ತಪಡಿಸಿದ್ದಾರೆ. ಕನ್ನಡ ವಿರೋಧಿಗಳ ಕೆಲಸ ಇದು. 2011ರಲ್ಲಿ ನಾನು ಈ ಗ್ರಂಥಾಲಯ ಸ್ಥಾಪಿಸಿದ್ದೆ. ದಿನಕ್ಕ 150 ಕ್ಕೂ ಹೆಚ್ಚು ಜನ ಓದುಗರು ಬರುತ್ತಿದ್ದರು. ಕನ್ನಡ ಗ್ರಂಥಾಲಯ ನಡೆಸಬಾರದು ಅಂತ ಕೆಲವು ಕರೆಗಳು ಬರುತ್ತಿದ್ದವು. ನಾನು ಯಾವುದಕ್ಕೂ ಹೆದರಿರಲಿಲ್ಲ ಎಂದಿದ್ದಾರೆ. ಕುರಾನ್, ಬೈಬಲ್, ಭಗವದ್ಗೀತೆ ಎಲ್ಲವೂ ಕನ್ನಡದಲ್ಲೆ ಇದ್ದವು. ಈಗ ಎಲ್ಲಾ ಭಸ್ಮವಾಗಿವೆ. ಕನ್ನಡ ವಿರೋಧಿ ಯಾರೆ ಇದ್ದರು, ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. : ------