“ಮೈಸೂರಿನಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿ : ಅನಾವಶ್ಯಕವಾಗಿ ಓಡಾಡಿದರೆ ಕಾನೂನು ಕ್ರಮ” ಮೈಸೂರು,ಏಪ್ರಿಲ್,10,2021(..) :ಮೈಸೂರಿನಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿಯಾಗಲಿದ್ದು, ರಾತ್ರಿ ಪೊಲೀಸರು ಗಸ್ತಿನಲ್ಲಿ ಇರುತ್ತಾರೆ. ಅನಾವಶ್ಯಕವಾಗಿ ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಡಿಸಿಪಿ ಪ್ರಕಾಶ್‌ಗೌಡ ಹೇಳಿದ್ದಾರೆ. ನಗರದ ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕುತ್ತೇವೆ. ಅಲ್ಲಿ ಓಡಾಟ ನಡೆಸಿದರೆ ತಪಾಸಣೆ ನಡೆಯಲಿದೆ. ತುರ್ತು ಸೇವೆ ಇದ್ದರೆ ಮಾತ್ರ ಅವಕಾಶ ಮಾಡಿಕೊಡುತ್ತೇವೆ. ನಮ್ಮ ಸಿಬ್ಬಂದಿ ಜೊತೆ 100 ಜನ ಹೋಮ್ ಗಾರ್ಡ್‌ಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದಿದ್ದಾರೆ. ಜನಸಂದಣಿ ಇರುವ ಸ್ಥಳದಲ್ಲಿ ಹೋಮ್ ಗಾರ್ಡ್ ಇರುತ್ತಾರೆ. ಅವರು ಸಾಮಾಜಿಕ ಅಂತರ, ಮಾಸ್ಕ್ ಬಗ್ಗೆ ತಪಾಸಣೆ ನಡೆಸುತ್ತಾರೆ. ಚಿತ್ರಮಂದಿರದ ಬಗ್ಗೆ ಸರ್ಕಾರದ ಆದೇಶದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. : -- ----