ಸರ್ಕಾರಕ್ಕೆ ಕೈ ಚಾಚುವ ಸ್ಥಿತಿಯಿದೆ : ಸಚಿವ ಲಕ್ಷ್ಮಣ ಸವದಿ ಬೆಂಗಳೂರು,ಏಪ್ರಿಲ್,10,2021 (..) :ಸಂಬಳ ಕೊಡಲು ಹಣವಿಲ್ಲ. ಸರ್ಕಾರಕ್ಕೆ ಕೈ ಚಾಚುವ ಸ್ಥಿತಿಯಿದೆ. ನೌಕರರು ಕೆಲಸಕ್ಕೆ ಹಾಜರಾದರೆ, ಮುಂದೆ ಎಲ್ಲವೂ ಸಿಗಲಿದೆ. ಅರ್ಥ ಮಾಡಿಕೊಳ್ಳಿ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಇದು ವಸತಿಗೃಹ, ಸಂಬಳ ಕೊಡದಿರುವ ವಿಚಾರವಲ್ಲ. ಕೆಲಸ ಕಳೆದುಕೊಂಡರೆ, ಮುಂದೆ ವಸತಿಗೃಹವು ಇರುವುದಿಲ್ಲ. ಕೆಲಸಕ್ಕೆ ಬಂದರೆ ಎಲ್ಲವೂ ಸಿಗುತ್ತದೆ ಎಂದಿದ್ದಾರೆ. ಮುಷ್ಕರದ ಬೆಂಕಿ ಹಂಚಿ ಕೋಡಿಹಳ್ಳಿ ಅಡುಗೆ ಮಾಡಿಕೊಳ್ಳುತ್ತಿದ್ದು, ಅವರು ಅನುಭವಿಸುತ್ತಾರೆ ಎಂದು ಕಿಡಿಕಾರಿದ್ದಾರೆ. : ----