“ಸಾಂಸ್ಕೃತಿಕನಗರಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಳ : ಅರಮನೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಬ್ರೇಕ್” ಮೈಸೂರು,ಏಪ್ರಿಲ್,10,2021(..) :ಮೈಸೂರಿನಲ್ಲಿ ದಿನೆ, ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸಿ ತಾಣಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಕೊರಾನಾ ಎರಡನೇ ಅಲೆ ಆರಂಭವಾಗಿದ್ದು, ಸಾರ್ವತ್ರಿಕ ರಜೆ ಹಾಗೂ ಭಾನುವಾರ ಒಂದು ಗಂಟೆಗಳ ಕಾಲ ಪ್ರವಾಸಿಗರ ಸೆಳೆಯುತ್ತಿದ್ದ ವಿದ್ಯುತ್ ದೀಪಾಲಂಕರಕ್ಕೆ ಹಾಗೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೂ ಬ್ರೇಕ್ ಹಾಕಲಾಗಿದೆ. ಏಪ್ರಿಲ್ 10 ರಿಂದ 30 ರವರೆಗೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ. : -- -----