ಐಪಿಎಲ್: ಇಂದು ಡೆಲ್ಲಿ ಕ್ಯಾಪಿಟಲ್ಸ್-ಚೆನ್ನೈ ಸೂಪರ್ ಕಿಂಗ್ಸ್ ಫೈಟ್ ಬೆಂಗಳೂರು, ಏಪ್ರಿಲ್ 10, 2021 (..): ಐಪಿಎಲ್ ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದು ಗೆಲುವಿಗಾಗಿ ಫೈಟ್ ನಡೆಯಲಿದೆ. ಹೌದು. ಮುಂಬಯಿಯ ‘ವಾಂಖೇಡೆ ಸ್ಟೇಡಿಯಂ’ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಲಿವೆ. ರಿಷಭ್‌ ಪಂತ್‌ ಪಾಲಿಗೆ ಇದು ಮೊದಲ ನಾಯಕತ್ವದ ಪ್ರಯೋಗವಾಗಿದೆ. ಅಂದಹಾಗೆ ಡೆಲ್ಲಿ ಕ್ಯಾಪಿಟಲ್ಸ್‌ 2020ರ ರನ್ನರ್ ಅಪ್‌ ತಂಡವಾಗಿದೆ. ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿರುವ ಚೆನ್ನೈ ಈ ಬಾರಿ ಉತ್ತಮ ಆರಂಭ ಪಡೆಯುವ ನಿರೀಕ್ಷೆ ಇದೆ.