ಟ್ರಾಫಿಕ್’ನಲ್ಲಿ ಕೋಪಗೊಂಡ ನಡುರಸ್ತೆಯಲ್ಲೇ ದಾಂಧಲೆ ನಡೆಸಿದ ರಾಹುಲ್ ದ್ರಾವಿಡ್!! ಬೆಂಗಳೂರು, ಏಪ್ರಿಲ್ 10, 2021 (..):ದ್ರಾವಿಡ್ ಕೋಪಗೊಂಡು ರಸ್ತೆಯಲ್ಲಿ ಕೂಗಾಡಿದ್ದನ್ನು ನೋಡಿದ್ದೀರಾ?! ಬಹುತೇಕರು ಹೇಳುವುದು ಇಲ್ಲ. ಆದರೆ ಇಂತಹದೊಂದು ವಿಡೀಯೋ ವೈರಲ್ ಆಗಿದೆ. ಪೇಮೆಂಟ್ಸ್‌ ಅಪ್ಲಿಕೇಶನ್ ‘ಕ್ರೆಡ್‌’ನ ಜಾಹೀರಾತಿನ ಕಂಟೆಂಟ್ ಒಂದರಲ್ಲಿ ದ್ರಾವಿಡ್‌ ಅವರು ಸಂಚಾರ ದಟ್ಟಣೆಯಲ್ಲಿ ಸಿಲುಕಿದಾಗ ಕಿರಿಕಿರಿಯಾಗಿ ಕೋಪಗೊಂಡು ಕಿರುಚಾಡುವ ವಿಡೀಯೋ ವೈರಲ್ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿದ ದ್ರಾವಿಡ್, ಸುತ್ತಲಿನ ಸಹ ಸಂಚಾರರ ಮೇಲೆ ಕೂಗಾಡಿ ತಮ್ಮ ಬ್ಯಾಟ್‌ನಿಂದ ದಾಂಧಲೆ ಮಾಡುವ ದೃಶ್ಯವನ್ನು ಇದು ಒಳಗೊಂಡಿದೆ. ಬಹುತೇಕ ಸೆಲೆಬ್ರೆಟಿಗಳು ಈ ವಿಡಿಯೋವನ್ನು ಸಖತ್ತಾಗಿ ಶೇರ್‌ ಮಾಡಿದ್ದು, ದ್ರಾವಿಡ್ ‘ಕೋಪಿಷ್ಠ’ ಮುಖ ಸಹ ಸಖತ್‌ ಕ್ಯೂಟ್ ಆಗಿದೆ ಎಂದಿದ್ದಾರೆ.