ಚೆಫ್ ದ ಕ್ಯುಸಿನ್ ನಲ್ಲಿ ಐಪಿಎಲ್ ದೋಸೆ ಹಬ್ಬ… ಮೈಸೂರು,ಏಪ್ರಿಲ್,9,2021(..):ಐಪಿಎಲ್ ಹಂಗಾಮ ಆರಂಭವಾಗುತ್ತಿರುವ ಬೆನ್ನಲ್ಲೇ ಮೈಸೂರಿನ ಚದುರಂಗ ರಸ್ತೆ ಟಿಕೆ ಬಡಾವಣೆ ಗಣೇಶ್ ಭಂಡಾರ್ ಸಮೀಪದಲ್ಲಿರುವ ಚೆಫ್ ದ ಕ್ಯುಸಿನ್ ಹೊಟೇಲ್ ನಲ್ಲೂ 50 ದಿನ ಐಪಿಎಲ್ ತಂಡದ ದೋಸೆಗಳ ಹಬ್ಬ ಇರಲಿದೆ. ಪ್ರತಿದಿನ ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಬಗೆಬಗೆಯ ದೋಸೆಗಳನ್ನು ಸವಿಯಬಹುದು. ರಾಯಲ್ ಚಾಲೆಂಜರ್ಸ್ ಪಿಜ್ಜಾ ದೋಸೆ, ಚೆನ್ನೈ ಚೀಸ್ ದೋಸೆ, ಮುಂಬೈ ಇಂಡಿಯನ್ ಮಿರ್ಚಿ ಮಶ್ರೂಮ್ ದೋಸೆ, ಕೋಲ್ಕತ್ತಾ ಕಿಂಗ್ ಸೈಜ್ ಮಸಾಲ ದೋಸೆ. ಸನ್ ರೈಸರ್ಸ್ ಸುಜವಾನ್ ದೋಸೆ, ಪಂಜಾಬ್ ಪಾವ್ ಬಜಿ ದೋಸೆ, ರಾಜಸ್ತಾನ ರವಾ ಆನಿಯನ್ ದೋಸೆ, ದಿಲ್ಲಿ ಕ್ಯಾಪಿಟಲ್ ಕ್ಯಾಪ್ಸಿಕಮ್ ಪನೀರಚ ದೋಸೆ ಸವಿಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಪಾರ್ಸೆಲ್ ಸೇವೆಗಾಗಿ ದೂರವಾಣಿ 7411883230, 9902876443, 0821_4190086 : --