ಹಠ ಮಾಡದೆ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ- 6ನೇ ವೇತನ ಆಯೋಗ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಿಎಂ ಬಿಎಸ್ ವೈ… ಬೆಂಗಳೂರು,ಏಪ್ರಿಲ್,9,2021(..):ಯಾವ ಕಾರಣಕ್ಕೂ 6ನೇ ವೇತನ ಆಯೋಗ ಜಾರಿ ಇಲ್ಲ. ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನ ಈಡೇರಿಸಲಾಗಿದೆ. ಇದರಲ್ಲಿ ಏನಾದರೂ ಸಮಸ್ಯೆ ಇದ್ದರೇ ಹೇಳಿ ಬಗೆ ಹರಿಸೋಣ. ಜನರು ಕಷ್ಟದಿಂದ ನರಳುತ್ತಿದ್ದಾರೆ. ನಾನು ಹಠ ಮಾಡುತ್ತಿಲ್ಲ. ರಾಜ್ಯದ ಹಣಕಾಸು ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಹಠ ಮಾಡದೇ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ ಎಂದು ಮನವಿ ಮಾಡಿದರು. ಯಾವ ಕಾರಣಕ್ಕೂ 6ನೇ ವೇತನ ಆಯೋಗ ಜಾರಿ ಇಲ್ಲ. ಸಾರಿಗೆ ನೌಕರರ ಜತೆ ಮಾತುಕತೆ ಇಲ್ಲ. ನೌಕರರ ಸಂಬಳಕ್ಕೆ ಶೇ.85 ರಷ್ಟು ಖರ್ಚಾಗುತ್ತಿದೆ. ಹೀಗಾಗಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದರು. …. , .9, 2021 (..): .. . , .. 8 9 8 . “ . . . . ,” . 6th . “ 85 ’ ,” .: .. / / / / / : - - – -