“ಬಿಜೆಪಿ ಸರ್ಕಾರ ಹಣ, ಹೆಂಡದ ಆಮಿಷದ ಮೊರೆ ಹೋಗುತ್ತಿದೆ” : ರಾಜ್ಯ ಕಾಂಗ್ರೆಸ್ ಟ್ವೀಟ್ ಬೆಂಗಳೂರು,ಏಪ್ರಿಲ್,09,2021(..): ಅಭಿವೃದ್ಧಿ ಕಾರ್ಯಗಳನ್ನು ಹೇಳಿ ಮತ ಕೇಳಲು ಒಂದೇ ಒಂದು ಸಾಧನೆಗಳಿಲ್ಲದ ರಾಜ್ಯ ಬಿಜೆಪಿ ಸರ್ಕಾರ. ಹಣ, ಹೆಂಡದ ಆಮಿಷದ ಮೊರೆ ಹೋಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ. ಸರ್ಕಾರ ರಚಿಸಲು ಶಾಸಕರ ಖರೀದಿ ಮಾಡುತ್ತಿದೆ. ಶಾಸಕರನ್ನ ಗೆಲ್ಲಿಸಲು ಮತಗಳ ಖರೀದಿ ಇದು ಬಿಜೆಪಿ ಹಿಡಿಯುವ ವಾಮಮಾರ್ಗ ಎಂದು ಆರೋಪಿಸಿದೆ. ಕರೋನಾ 2ನೇ ಅಲೆಗೆ ದೇಶ ಕಂಗೆಟ್ಟಿದೆ. ಈ ಸಮಯದಲ್ಲಿ ಲಸಿಕೆಗಳು ಶೀಘ್ರವಾಗಿ, ವ್ಯಾಪಕವಾಗಿ ಪ್ರತಿಯೊಬ್ಬರನ್ನೂ ತಲುಪಬೇಕು. ಲಸಿಕೆಗಳ ಪರಿಣಾಮದ ಬಗ್ಗೆ ಅಪವಾದಗಳಿದ್ದರೂ, ರೋಗ ನಿರೋಧಕ ಶಕ್ತಿ ವೃದ್ಧಿಗೆ ಅನುಕೂಲವಾಗಬಲ್ಲದು. ಸರ್ಕಾರ ಲಸಿಕೆಗಳನ್ನು, ಲಸಿಕೆ ಸಂಬಂಧಿತ ಚಟುವಟಿಕೆಗಳನ್ನು ವ್ಯಾಪ್ತಿಯಿಂದ ಹೊರಗಿಟ್ಟು ತೆರಿಗೆ ಮುಕ್ತಗೊಳಿಸಬೇಕು ಎಂದು ತಿಳಿಸಿದ್ದಾರೆ. : -------