“ಸಾರಿಗೆ ನೌಕರರನ್ನು ಕರೆದು ಸರ್ಕಾರ ಚರ್ಚಿಸಬೇಕು” : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಬೆಂಗಳೂರು,ಏಪ್ರಿಲ್,09,2021(..): ಸಾರಿಗೆ ನೌಕರರನ್ನು ಕರೆದು ಸರ್ಕಾರ ಚರ್ಚಿಸಬೇಕು. ನೌಕರರನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರ ಸಮಸ್ಯೆಯನ್ನು ಆಲಿಸಿ, ಶೀಘ್ರವೇ ಬಗೆಹರಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. : -------..