ಅಬಕಾರಿ ಅಧಿಕಾರಿಗಳಿಂದ ದಾಳಿ : ಗಾಂಜಾ ಜಪ್ತಿ, ಆರೋಪಿ ಬಂಧನ ಮೈಸೂರು,ಏಪ್ರಿಲ್,08,2021(..): ಖಚಿತ ಮಾಹಿತಿಯ ಮೇರೆಗೆ ಮಂಡಿ ಮೊಹಲ್ಲಾದ ಸಯ್ಯದ್ ದಸ್ತಗೀರ್ ಎಂಬುವನ ಮನೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನೆಡೆಸಿ 275 ಗ್ರಾಂ ಒಣ ಗಾಂಜಾ ಜಪ್ತಿ ಮಾಡಿದ್ದು, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೈಸೂರು ಅಬಕಾರಿ ಇಲಾಖೆ ವಲಯ 1ರ ಅಬಕಾರಿ ನಿರೀಕ್ಷಕರಾದ ಎ.ಸಿ.ಲತಾ ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆಯಿಂದಾಗಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಚೌಡನಾಯ್ಕ, ಅಬಕಾರಿ ಕಾನ್ಸ್ ಟೇಬಲ್ ಗಳಾದ ರಘುರಾಜ್, ರಾಜಶೇಖರ್, ನಾಗರಾಜು, ಹರೀಶ್, ವಾಹನ ಚಾಲಕ ಸತೀಶ್ ಭಾಗವಹಿಸಿದ್ದರು. : ---275g ----