ಉದ್ಯಮಿ, ಕಲಾಪೋಷಕ ಕೆ.ವಿ.ಮೂರ್ತಿ ನಿಧನ… ಮೈಸೂರು,ಏಪ್ರಿಲ್,8,2021(..):ಉದ್ಯಮಿಯಾಗಿದ್ದ, ಕಲಾಪೋಷಕರಾಗಿದ್ದ ಕೆ.ವಿ.ಮೂರ್ತಿ (90) ಗುರುವಾರ ನಸುಕಿನಲ್ಲಿ ನಿಧನರಾದರು. ಜಯಲಕ್ಷ್ಮಿಪುರಂನ ಕಾಳಿದಾಸ ರಸ್ತೆಯ 2ನೇ ಅಡ್ಡರಸ್ತೆಯ ಬಳಿಯಿರುವ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಅವರು ನಿಧನರಾದರು. ಅವರಿಗೆ ಮೂವರು ಪುತ್ರಿಯರು ಇದ್ದಾರೆ. ಸಿವಿಲ್ ಎಂಜಿನಿಯರ್ ಆಗಿದ್ದ ಅವರು ಸಮುದ್ರ ಬಳಿಯ ಬಂದರು ಕಟ್ಟುವಲ್ಲಿ ಶ್ರಮಿಸಿದರು. ಮಂಗಳೂರು, ಚೆನ್ನೈ, ವಿಶಾಖಪಟ್ಟಣಂನ ಬಂದರುಗಳ ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸಿದರು. ನಂತರ ಮೈಸೂರಿನಲ್ಲಿ ನೆಲೆ ನಿಂತು ಅಗ್ರೊ ಕೆಮಿಕಲ್ ಹಾಗೂ ಕಾಫಿ ಡಿಕಾಕ್ಷನ್ ಉದ್ಯಮದಲ್ಲಿ ತೊಡಗಿಕೊಂಡರು. ಜೊತೆಗೆ ಕಲಾಪೋಷಕರೂ ಆದರು. ನಾದಬ್ರಹ್ಮ ಸಂಗೀತ ಸಭಾ, ಜೆಎಸ್ಎಸ್ ಸಂಗೀತ ಸಭಾ, ತ್ಯಾಗರಾಜ ಸಂಗೀತ ಸಭಾ ಹಾಗೂ ವಸುಂಧರಾ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಅಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು. ಅವರ ಅಂತ್ಯಕ್ರಿಯೆ ಗೋಕುಲಂನ ಚಿರಶಾಂತಿಧಾಮದಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು. : - - - .