“ಹಣಕಾಸು ಇಲಾಖೆ ಅನುಮತಿ ಕೊಟ್ಟರೆ 250 ಬೋಧಕ ಹುದ್ದೆಗಳ ಭರ್ತಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮೈಸೂರು,ಏಪ್ರಿಲ್,07,2021(..) :ಬೋಧಕರ ನೇಮಕಕ್ಕೆ ಸರ್ಕಾರ ಬಜೆಟ್ ನಲ್ಲಿ ಒಪ್ಪಿಗೆ ನೀಡಿಲ್ಲ. ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದ್ದು, ಈಗಾಗಲೇ ಒಪ್ಪಿಗೆ ನೀಡಿದ್ದ ಹುದ್ದೆಗಳ ಬಗ್ಗೆ ಮಾಹಿತಿ ನೀಡುವಂತೆ ಹಣಕಾಸು ಇಲಾಖೆಯಿಂದ ಪತ್ರ ಬಂದಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು. ಶಿಕ್ಷಣ ಇಲಾಖೆ 250 ಮಂದಿ ಬೋಧಕರ ನೇಮಕಕ್ಕೆ ಅನುಮತಿ ನೀಡಿತ್ತು. ಆದರೆ, ಕೊರೊನಾದಿಂದ 250 ಹುದ್ದೆಗಳ ನೇಮಕ ತಡೆಹಿಡಿಯಲಾಗಿತ್ತು. ಈ ಮಾಹಿತಿಯನ್ನು ಶಿಕ್ಷಣ ಇಲಾಖೆಯ ಮೂಲಕ ಹಣಕಾಸು ಇಲಾಖೆಗೆ ಒದಗಿಸಲಾಗುವುದು. ಎಸ್ಸಿ,ಎಸ್ಟಿ 77 ಹುದ್ದೆ, ಹೈದರ್ ಬಾದ್ ಕರ್ನಾಟಕ 55 ಹುದ್ದೆ, ಸಾಮಾನ್ಯ ವರ್ಗ 150 ಹುದ್ದೆಗಳಿಗೆ ಮನವಿ ಮಾಡಲಾಗುವುದು ಎಂದರು. ಕಡಿಮೆ ಸಂಖ್ಯೆಯ ಬೋಧಕ ವರ್ಗದಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪರಿಶೀಲನೆ ಮಾಡುವಂತೆ ಮತ್ತು ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. … 250 . : , . 07, 2021 (..): “ . , ,” . . , -, .“ 250 , . , . 77 / , 55 , 150 . . ,” .: . . / -/ / 250 / / : ----250 ----..