ರಾಜ್ಯ ಸಾರಿಗೆ ನೌಕರರ ರಜೆ ರದ್ಧುಗೊಳಿಸಿ ಆದೇಶ: ಅನಗತ್ಯ ರಜೆ ಹಾಕಿದ್ರೆ ಸಂಬಳ ಕಡಿತದ ಎಚ್ಚರಿಕೆ… ಬೆಂಗಳೂರು,ಏಪ್ರಿಲ್,6,2021(..):ಬೇಡಿಕೆ ಈಡೇರದ ಹಿನ್ನೆಲೆ ರಾಜ್ಯ ಸಾರಿಗೆ ನೌಕರರು ನಾಳೆಯಿಂದ ಮತ್ತೆ ಅನಿರ್ಧಿಷ್ಟಾವಧಿ ಮುಷ್ಕರ ಹೂಡಿದ್ದು ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ರಜೆ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಸುತ್ತೋಲೆ ಹೊರಡಿಸಿದ್ದಾರೆ. ವಾರದ ರಜೆ ಮತ್ತು ತುರ್ತು ರಜೆ ಹೊರತುಪಡಿಸಿ ಎಲ್ಲಾ ನೌಕರರು ರಜೆ ರದ್ದುಗೊಳಿಸಿರುವ ಸರಕಾರ, ಅನಗತ್ಯ ರಜೆ ಹಾಕಿದರೆ ವೇತನ ಕಡಿತ ಮಾಡುವುದಾಗಿ ಎಚ್ಚರಿಸಿದೆ. ನಾಳೆಯಿಂದ ಅನಗತ್ಯವಾಗಿ ಸಾರಿಗೆ ನೌಕರ ಸಿಬ್ಬಂದಿ ರಜೆ ಹಾಕಿದರೆ ವೇತನ ನೀಡಲ್ಲ. ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವರಿಗೆ ಈ ಸುತ್ತೋಲೆ ಅನ್ವಯ ಆಗಲಿದ್ದು, ಅನಗತ್ಯವಾಗಿ ರಜೆ ಹಾಕಿದರೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ತಿಳಿಸಿದ್ದಾರೆ. …. , . 6, 2021 (..): , . . , . .: / / . / / : - – - – -