ಬಾಲಿವುಡ್ ಬಿಗ್ ಬಿ ಜತೆ ಬರ್ತ್ ಡೇ ಸೆಲೆಬ್ರೆಟ್ ಮಾಡಿದ ರಶ್ಮಿಕಾ ಬೆಂಗಳೂರು, ಏಪ್ರಿಲ್ 06, 2021 (..):ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಈ ಬಾರಿ ಅಮಿತಾಭ್​ ಬಚ್ಚನ್​ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೌದು. ಗುಡ್​ ಬೈ ಸಿನಿಮಾ ಸೆಟ್​ನಲ್ಲೇ ಬಾಲಿವುಡ್ ಬಿಗ್ ಬಿ ಜತೆ ಕೇಕ್​ ಕತ್ತರಿಸಿ ಬರ್ತ್​ ಡೇ ಆಚರಿಸಿಕೊಂಡಿದ್ದಾರೆ ಕೊಡಗಿನ ಕುವರಿ. ಜತೆಗೆನಿರ್ದೇಶಕ ವಿಕಾಸ್​ ಬಹಲ್​ ಜೊತೆ ಪೋಸ್​ ನೀಡಿ ಸಂಭ್ರಮಿಸಿದ್ದಾರೆ. ಇದು ನಿಜಕ್ಕೂ ತೃಪ್ತಿ ತಂದ ದಿನ ಎಂದು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಂದಹಾಗೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಬಾಲಿವುಡ್ ಸಿನಿಮಾ ಗುಡ್​ಬೈ ಶೂಟಿಂಗ್​ ಆರಂಭವಾಗಿದೆ. ಮಿಷನ್​ ಮಜ್ನು ಚಿತ್ರದ ಡಬ್ಬಿಂಗ್​ ಸಹ ಮುಗಿಸಿದ್ದಾರೆ.