ಹ್ಯಾಟ್ರಿಕ್ ಹೀರೋ ಶಿವಣ್ಣ ಜತೆ ನಿಖಿಲ್ ಕುಮಾರಸ್ವಾಮಿ ಆ್ಯಕ್ಟಿಂಗ್! ಬೆಂಗಳೂರು, ಏಪ್ರಿಲ್ 06, 2021 (..): ನಟ ನಿಖಿಲ್ ಕುಮಾರಸ್ವಾಮಿ ಮುಂದಿನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಜತೆ ನಟಿಸಲಿದ್ದಾರೆ. ಹೌದು. ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ನಿಖಿಲ್ ಕುಮಾರಸ್ವಾಮಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್ 24 ರಂದು ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವಿದ್ದು, ಅಂದು ಚಿತ್ರದ ಅಧಿಕೃಕ ಘೋಷಣೆ ಸಾಧ್ಯತೆಯಿದೆ. ಶಿವಣ್ಣನ ಚಿತ್ರದಲ್ಲಿ ನಿಖಿಲ್ ಗಾಗಿ ವಿಶೇಷ ಪಾತ್ರ ಸಿದ್ಧ ಮಾಡಲಾಗಿದ್ದು, ಈ ಸಂಬಂಧ ನಿರ್ದೇಶಕ ನಂದ ಕಿಶೋರ್ ನಿಖಿಲ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ನಿಖಿಲ್ ಮೊದ ಬಾರಿಗೆ ಬೆಳ್ಳಿ ತೆರೆ ಹಂಚಿಕೊಳ್ಳಲಿದ್ದಾರೆ.