ಮದುವೆ ಹಾಗೂ ಗರ್ಭಧಾರಣೆ ಕುರಿತ ನಟಿ ದಿಯಾ ಮಿರ್ಜಾ ಖಡಕ್ ಮಾತು ಬೆಂಗಳೂರು, ಏಪ್ರಿಲ್ 06, 2021 (..): ಮದುವೆ ಹಾಗೂ ಗರ್ಭಧಾರಣೆ ಕುರಿತು ನಟಿ ದಿಯಾ ಮಿರ್ಜಾ ಖಡಕ್ ಮಾತುಗಳನ್ನಾಡಿದ್ದಾರೆ. ಇನ್ಸ್ಟಾ ಗ್ರಾಮ್ ನ ಬಳಕೆದಾರರೊಬ್ಬರಿಗೆ ದಿಯಾ ಸರಿಯಾಗಿ ಉತ್ತರ ನೀಡಿದ್ದಾರೆ. ಮದುವೆಗೆ ಮೊದಲೇ ಗರ್ಭಿಣಿ ಆಗಿರುವ ವಿಚಾರವನ್ನು ದಿಯಾ ಬಹಿರಂಗ ಪಡಿಸಿದ್ದಾರೆ. ಮದುವೆ ಗರ್ಭಧಾರಣೆಯ ಪಲಿತಾಂಶವಲ್ಲ ಎಂದಿದ್ದಾರೆ ದಿಯಾ. ನಾವು ಮೊದಲು ಮದುವೆ ಮಾಡಿಕೊಂಡಿರಲಿಲ್ಲ. ಮದುವೆಯ ಯೋಜನೆ ಮಾಡುತ್ತಿರುವಾಗಲೇ ನಾವು ಪಾಲಕರಾಗುತ್ತಿದ್ದೇವು ಎಂದು ನಮಗೆ ತಿಳಿಯಿತು. ನಾವು ಒಟ್ಟಿಗೆ ನಮ್ಮ ಜೀವನವನ್ನು ಕಳೆಯಲು ಬಯಸಿದ್ದರಿಂದ ನಾವು ಮದುವೆಯಾಗಿದ್ದೇವೆ. ನಾವು ಮಗು ಮಾಡಿಕೊಳ್ಳಲಿದ್ದೆವೆ ಎಂದು ಈ ಹಾಟ್ ನಟಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಫೆಬ್ರವರಿ 15 ರಂದು ಉದ್ಯಮಿ ವೈಭವ್ ರೇಖಿ ಅವರ ಜೊತೆ ದಿಯಾ ಮಿರ್ಜಾ ಮದುವೆ ಮುಂಬೈನ ಬಾಂದ್ರಾದಲ್ಲಿ ನಡೆದಿತ್ತು.