6ನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ: ಮುಷ್ಕರಕ್ಕೆ ಮುಂದಾದ್ರೆ ಕಠಿಣ ಕ್ರಮ- ಸಿ.ಎಸ್ ರವಿಕುಮಾರ್ ಎಚ್ಚರಿಕೆ… ಬೆಂಗಳೂರು,ಏಪ್ರಿಲ್,6,2021(..):6ನೇ ವೇತನ ಆಯೋಗದಂತೆ ವೇತನ ನೀಡಲು ಸಾಧ್ಯವಿಲ್ಲ. ನಾಳೆ ಮುಷ್ಕರಕ್ಕೆ ಮುಂದಾದರೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿ.ಎಸ್ ರವಿಕುಮಾರ್, , ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾಗಿರುವ 6ನೇ ವೇತನದ ಸಂಬಳವನ್ನು ಮಾಡಲು ಸಾಧ್ಯವೇ ಇಲ್ಲ, ಬದಲಿಗೆ ವೇತನದಲ್ಲಿ ಹೆಚ್ಚಳ ಮಾಡಲಾಗುವುದು. ಸಾರಿಗೆ ನೌಕರರ ಶೇ. 8 ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ ಎಂದರು. ಕೋವಿಡ್ ಹಿನ್ನೆಲೆ ಮುಷ್ಕರ ಕೈಬಿಡಿ. ನಿಮ್ಮ 8 ಬೇಡಿಕೆ ಈಡೇರಿಸಿದ್ದೇವೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೇತನ ಹೆಚ್ಚಳ ಮಾಡಲು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್ ಸಮಯದಲ್ಲೂ ಸಂಬಳ ನೀಡಲಾಗಿದೆ. ಸಾರಿಗೆ ಇಲಾಖೆಗೆ ನಷ್ಟ ಉಂಟಾದರೂ ಸಂಬಳ ನೀಡಿದ್ದೇವೆ.ನಾಳೆ ಸಾರಿಗೆ ನೌಕರರು ಮುಷ್ಕರ ಹೂಡಲು ಮುಂದಾದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾರಿಗೆ ನೌಕರರ ಸಂದಾನ ಪ್ರಶ್ನೆಯೇ ಇಲ್ಲ. ಎಸ್ಮಾ ಜಾರಿ ಮಾಡುವ ಸಂಬಂದ ಚರ್ಚೆ ಮಾಡಿದ್ದೇವೆ ಎಂದು ಸಿಎಸ್ ರವಿಕುಮಾರ್ ತಿಳಿಸಿದರು. ನಾಳೆ ಬೇಕಾಗಿರುವ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು, ಖಾಸಗಿಯವರ ನೆರವಿನೊಂದಿಗೆ ವಾಹನ ಸಂಚಾರ ನಡೆಸಲಾಗುವುದು. ಬಸ್ ಗಳಿಗೆ ಹಾನಿ ಮಾಡಿದರೇ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. … 6th : , . 6,2021 (..): . 6th . .. . . 8%. -19 . “ . . . . , . . ,” ., . “ ,” .: / / . / 6th : 6th - - - - – - –-